Funny Jokes

‪ಗುಂಡ : ಬಾಳದಿನಾಅತು

‪ಗುಂಡ : ಬಾಳದಿನಾಅತು ನಿಮ್ಮಜ್ಜ ಕಾಣಾವಲ್ಲಾ ಎಲ್ಲಿಹ್ವಾದ್ನೊ ತಮ?

ಪುಂಡ : ಅವ ಮನ್ನೆರೆ ಸತ್ತಲ್ಲರಿ ?

ಗುಂಡ : ಅಯ್ಯೋ ದೇವ್ರೇ..!! ಯಾಕೊ ತಮ್ಮ ಏನಾಗಿತ್ತ ಅವರಿಗೆ ? ಖಾತೆವಾಡದ್ ಕುದರಿ ಇದ್ದಂಗ ಇದ್ದರಲ್ಲ ?

ಪುಂಡ : ಬಾಬಾ ರಾಮದೇವ್ರ್ ಟೀವ್ಯಾಗ ಯೋಗಾಸನ ಮಾಡಾಕತ್ತಿದ್ದರಾರಿ . ಅದ್ನ ನೋಡಿಕೋತ ನಮ್ಮಜ್ಜನು ಅವರ ಮಾಡಿದಂಗ ಮಾಡಾಕತ್ತಿದ್ದ ರಿ.

ಗುಂಡ : ಹೌದಾ ! ಛಲೊ ಆತಬಿಡೊತಮ್ಮಾ . ಅಲ್ಲೋ ತಮ್ಮಾ ಯೋಗಾಸನಾಮಾಡಿ ಯಾರರಾ ಸಾಯತಾರೇನ ?

ಪುಂಡ : ಬಾಬಾ ಯೋಗ ಮಾಡಿಕೊತ ಮಾಡಿಕೊತ ಹೇಳಿದರರಿ
*ನೀವ್ ಎಲ್ಲಾರು ಉಸ್ರ್ ಒಳಗ ಎಳಕೋರಿ. ನಾ ಹೇಳುವರಿಗು ಯಾರ್ ಉಸರ ಹೊರಗ ಬಿಡಬ್ಯಾಡರಿ*
ಇಷ್ಟ ಹೇಳಿ ಮುಗ್ಸೋದರಾಗ ಪಟ್ ಅಂತ ಕರೆಂಟ್ ಹೋತರಿಪ್ಪಾ.

ಗುಂಡು : ಹೌದಾ ! ಆಮ್ಯಾಲ ?

ಪುಂಡ : ಅಮ್ಯಾಲ್ ಏನ್ ಕೇಳತೆರಿ ? ಅವ್ನೌನ ಬರೋಬರಿ ಮೂರ್ ತಾಸಿಗ್ ಕರೆಂಟ್ ಬಂತರಿ. *ಉಸರ ಹೊರಗ ಬಿಡರಿ* ಅಂತ ಹೇಳಾಕ ಟೀವಿನ್ಯಾಗ ರಾಮದೇವ ಇರಲಿಲ್ಲ. ಉಸರ ಬಿಡಾಕ ಈ ಜಗತ್ತಿನ್ಯಾಗ ನಮ್ಮಜ್ಜನು ಇರಲಿಲ್ಲ.

😜😀😂😜😀😂😜😀😂

Funny Whatsapp Videos

Funny Whatsapp GIFs