Play It Now

‪ಗುಂಡ : ಬಾಳದಿನಾಅತು ನಿಮ್ಮಜ್ಜ ಕಾಣಾವಲ್ಲಾ ಎಲ್ಲಿಹ್ವಾದ್ನೊ ತಮ? ಪುಂಡ : ಅವ ಮನ್ನೆರೆ ಸತ್ತಲ್ಲರಿ ? ಗುಂಡ : ಅಯ್ಯೋ ದೇವ್ರೇ..!! ಯಾಕೊ ತಮ್ಮ ಏನಾಗಿತ್ತ ಅವರಿಗೆ ? ಖಾತೆವಾಡದ್ ಕುದರಿ ಇದ್ದಂಗ ಇದ್ದರಲ್ಲ ? ಪುಂಡ : ಬಾಬಾ ರಾಮದೇವ್ರ್ ಟೀವ್ಯಾಗ ಯೋಗಾಸನ ಮಾಡಾಕತ್ತಿದ್ದರಾರಿ . ಅದ್ನ ನೋಡಿಕೋತ ನಮ್ಮಜ್ಜನು ಅವರ ಮಾಡಿದಂಗ ಮಾಡಾಕತ್ತಿದ್ದ ರಿ. ಗುಂಡ : ಹೌದಾ ! ಛಲೊ ಆತಬಿಡೊತಮ್ಮಾ . ಅಲ್ಲೋ ತಮ್ಮಾ ಯೋಗಾಸನಾಮಾಡಿ ಯಾರರಾ ಸಾಯತಾರೇನ ? ಪುಂಡ : ಬಾಬಾ ಯೋಗ ಮಾಡಿಕೊತ ಮಾಡಿಕೊತ ಹೇಳಿದರರಿ ನೀವ್ ಎಲ್ಲಾರು ಉಸ್ರ್ ಒಳಗ ಎಳಕೋರಿ. ನಾ ಹೇಳುವರಿಗು ಯಾರ್ ಉಸರ ಹೊರಗ ಬಿಡಬ್ಯಾಡರಿ ಇಷ್ಟ ಹೇಳಿ ಮುಗ್ಸೋದರಾಗ ಪಟ್ ಅಂತ ಕರೆಂಟ್ ಹೋತರಿಪ್ಪಾ. ಗುಂಡು : ಹೌದಾ ! ಆಮ್ಯಾಲ ? ಪುಂಡ : ಅಮ್ಯಾಲ್ ಏನ್ ಕೇಳತೆರಿ ? ಅವ್ನೌನ ಬರೋಬರಿ ಮೂರ್ ತಾಸಿಗ್ ಕರೆಂಟ್ ಬಂತರಿ. ಉಸರ ಹೊರಗ ಬಿಡರಿ ಅಂತ ಹೇಳಾಕ ಟೀವಿನ್ಯಾಗ ರಾಮದೇವ ಇರಲಿಲ್ಲ. ಉಸರ ಬಿಡಾಕ ಈ ಜಗತ್ತಿನ್ಯಾಗ ನಮ್ಮಜ್ಜನು ಇರಲಿಲ್ಲ. 😜😀😂😜😀😂😜😀😂
TopJokes.in